Sunday, 27 April 2014

Ulidavaru Kandanthe

 I'll start with the latest and the most fresh experiment made in Kannada .. Ulidavaru Kandanthe ..

Whenever we start talking about Kannada movies, the acknowledgement goes to Mungaru Male team. They made Kannada movies look good to say the least.. 
When we all grew up, we watched Hollywood movies like crazy and worshipped few of them like gods.. Now, consider one such guy wanting to make a movie and wants to show the world that he was inspired by legends. He takes a storyline of his own, makes the way his teachers would have done it.. At the end, what you would get is a good movie.
The first chase sequence has a background of any Quentin tarentino movie. Things that follow are: Martin Scorsese way of killing people. Chapters in the movie like the one in Kill Bill. Scarface meets Agneepath. Departed re-executed. Best of all, sin city in Kannada! I was lost in it all, thinking, did he just tried all the best work in a single Kannada movie?! 
I don't wanna talk about the story or the production values or the technicality in the movie. But it's the tribute to those movies is what made me like it. Had it been edited a little, you wouldn't have a single complaint.

Naa kandante - Ulidavaru kandante - Neevu kaanabeku
As seen by me - As seen by the rest - You have to see
Enta saavu marre.. Confusion untalla..

Thursday, 10 April 2014

ಬೇಡುವೆನು ವರವನ್ನು , ಒಳ್ಳೆ ಫಿಲಂ ತೆಗಿಯೆಂದು .. ಕಡೆ ತನಕ ಮರಿಯಲ್ಲ ಪ್ರೇಕ್ಷಕ ..

ಎದ್ದೇಳು  ಮಂಜುನಾಥ  ಫಿಲಂ ನಲ್ಲಿ  ತಬಲ  ನಾಣಿ ದು  ಒಂದು  ಡೈಲಾಗ್  ಇತ್ತು .. "ಉಪೇಂದ್ರ  ಅವರಿಗೆ  ಕೆಪ್ಯಾಸಿಟಿ  ಇತ್ತು .. ಎರಡು  ಮಾಡ್ಕೊಂಡ್ರು .. ಜೈಸಿಕೊಂಡ್ರು  .. ಹಾಗಂತ  ಎಲ್ಲಾರು  ಮಾಡೋದಿಕ್ಕೆ  ಆಗತ್ತಾ .. ನಮ್ಮ  ಹುಡುಗ  ನೋಡಿ .. ಎರಡು  ಮಾಡ್ತೀನಿ  ಅಂತ  ಹೋಗಿ  ಸಿಕ್ಕಿಹಾಕಿಕೊಂಡು  ಎರಡು  ವರುಷ  ಆಯಿತು  ಆಚೆ  ಬರೋದಿಕ್ಕೆ ... ರಿಲೀಸ್  ಆದ್ಮೇಲೆ ಏನಾಯ್ತು   ಅಂತ  ನಿಮಗೆ  ಗೊತ್ತಲ್ವ "
 
ಜೋಗಯ್ಯ  ಮತ್ತೆ  ಸೂಪರ್  ನಡುವೆ  ಇರುವ  ಒಂದೇ  ಒಂದು  ವ್ಯತ್ಯಾಸ  ಅಂದ್ರೆ  ಉಪೇಂದ್ರ ನೇ ... ಜೋಗಿ  ಎಲ್ಲಿ  ಮುಗಿತು  ಅಲ್ಲಿಂದ  ಶುರು  ಮಾಡ್ಕೊಂಡು   ಸೂಪರ್  ಆಗಿ  ತೆಗಿತೀನಿ  ಅಂತ  ಹೋದರು .. ಮಟಾಶ್  ಅಷ್ಟೇ .. ಇನ್ನ  ಜೋಗಯ್ಯ  ಸೀಕ್ವೆಲ್  ಬರಬೇಕು  ಅಂದ್ರೆ  ಬೇರೆ  ಡೈರೆಕ್ಟರ್  ದಾರಿ  ತೋರಿಸಬೇಕು  ಪ್ರೇಂ ಗೆ .. ಶಿವಣ್ಣ  ಆಕ್ಟಿಂಗ್  ಸೂಪರ್ .. ತಗ್ಲಾಕ್ಕೊಂಡೆ,  ಕುರಿ  ಕುಯ್ಯೊಂಗಿಲ್ಲ  ಬೆಸ್ಟ್  ಸಾಂಗ್ಸ್ .. ಸಿಲ್ಲಿ  ಲಲ್ಲಿ  ಗ್ಯಾಂಗ್  ಅವರನ್ನೇ  ಇಲ್ಲಿ  ಬೇರೆ  ಬೇರೆ  ಪಾತ್ರ ಗಳಲ್ಲಿ  ಉಪಯೋಗಿಸಿಕೊಂಡಿದ್ದು  ಉತ್ತಮ .. heroine ಗೆ  ಕನ್ನಡ ನೇ   ಬರಲ್ಲ , ಅದರಲ್ಲಿ  ಉತ್ತರ  ಕರ್ನಾಟಕದವಳು ಅಂತ  ಬೇರೆ ತೋರಿಸಿಬಿಟ್ಟಿದಾರೆ ... ಅವರು ಮಾತಾಡಿದಾಗೆಲ್ಲ  ಧಾರವಾಡ್  ಕಡೆಯವರು  ಪರ  ಪರ  ಪರ  ಅಂತ  ಕೆರ್ಕೊಂಡು  ಬಿಡ್ತಾರೆ ..
 
ಪ್ರೇಂ ಗೆ  ಈ  ಮಾತು  "ನಿಮವ್ವ  ಹೇಳವರೆ , ಒಳ್ಳೆ  ಫಿಲಂ  ತೆಗೆದು  ದುಡಿ , ಈ  ಕಿತ್ತೋಗಿರೋ  ಫಿಲಂ ಗಳು  ಬೇಡ  ಅಂತ ".. ಇರೋ  ಬರೋ ಸೈಡ್  ಆಕ್ಟರ್ಸ್ ಗೆಲ್ಲ  ಒಳ್ಳೆ  ಬಟ್ಟೆ  ಉಡ್ಸಿದರೆ  ಹೀರೋ  ಮಾತ್ರ  ಕಿತ್ತೋಗಿರೋ  ಬಟ್ಟೆ  ಹಾಕೊಂಡೆ  ಮೆರಿಯೋ  ಪ್ರಸಂಗ  ಏನು  ಅಂತ  ನಾ  ಕಾಣೆ !! ಎಲ್ಲದಕ್ಕಿಂತ  ಮೇಲಾಗಿ , ಫಿಲಂ  ರಿಲೀಸ್  ಆಗೋದಿಕ್ಕೆ  ಎರಡು  ದಿನ  ಮುಂಚೆ  ಪ್ರೆಸ್  ರಿಲೀಸ್ ನಲ್ಲಿ  ಇದು  ರೌಡಿಸಂ  ಫಿಲಂ  ಅಲ್ಲ  ಅಂತ  ಬೇರೆ ಹೇಳಿದಾರೆ .. ಕನ್ನಡ   ಫಿಲಂ  ನೋಡಿ  ಬೈದಿದಿನಿ .. ಯಾರಾದ್ರೂ  ಮತ್ತೆ  ಲೈಫು ಇಷ್ಟೇನೆ  ಹಾಡಿನ  ಸಾಲುಗಳು  ಹೇಳಿದ್ರಿ  ಅಂದ್ರೆ , ಜೋಗಯ್ಯ  ನ  ಬ್ಯಾಕ್  ಟು  ಬ್ಯಾಕ್  ತೋರಿಸಿಬಿಡ್ತೀನಿ .. ಶಿವಣ್ಣ ಗೋಸ್ಕರ ನೋಡ್ಬೇಕು .. ಬೇರೆ  ಏನು  ಹೇಳ್ಕೊಳೋ  ತರಹ  ಇಲ್ಲ ..  2D ನಲ್ಲಿ  ನೋಡಿದ  ನಾನೇ  ಇಷ್ಟೆಲ್ಲಾ  ಬರೆದಿರಬೇಕಾದ್ರೆ , 3D ನಲ್ಲಿ  ನೋಡಿದವರು  ಸಂತೋಷ್  ಹೆಗ್ಡೆ  ಹತ್ತಿರ  ಪೇಪರ್  ಇಸ್ಕೊಂಡು  ಬಂದು  ಬರೀಬೇಕು  ಅಷ್ಟೇ .. 1000 ಪೇಜ್  ಕೂಡ  ಕಮ್ಮಿ  ಆಗಬಹುದು .. 
 
ಪ್ರೇಂ  ವರ್ಷನ್  ಇನ್  ಮೂವಿ : ಹುಟ್ಟು  ಭಿಕ್ಷೆ  ಕಣೋ , ಬದುಕು  ಶಿಕ್ಷೆ  ಕಣೋ .. ಬ್ರಹ್ಮ  ಬರೆದಿದ್ದು  ಇಷ್ಟೇ  ಕಣೋ ..
ನನ್  ವರ್ಷನ್  after the movie: ಪ್ರೇಂ  ಸಾಕು  ಕಣೋ , ಜೋಗಯ್ಯ  ಒಂಥರಾ ಶಿಕ್ಷೆ  ಕಣೋ .. ನೀನು  ಇನ್ಮೇಲೆ  ಸೀಕ್ವೆಲ್  ತಗೆದರೆ  ಅಷ್ಟೇ  ಕಣೋ ..!!!

Friday, 4 April 2014

Pancharangi

ಕನ್ನಡ  ಚಿತ್ರಗಳು , ಈ  ರೀತಿ  ವೈವಿಧ್ಯತೆಗಳು , ಸಿಂಪಲ್  ಸ್ಟೋರಿಗಳು , ನೋಡಿ  ಆಗಿದೆ  ಬಹು  ದಿನಗಳು ..
ಆ  ಸಮುದ್ರದ  ಅಲೆಗಳು , ಸನ್ನಿವೇಶಗಳು , ಭಟ್ಟರ  ಕಲ್ಪನೆಗಳು , ಕಲ್ಪನೆ  ಇಂದ  ತೆರೆಗೆ  ತಂದ  ಆ  ಕಲೆಗಳು , ಪಂಚರಂಗಿ  ಹಾಡುಗಳು , ಇಡಿ  ತಂಡಕ್ಕೆ  ನನ್ನ  ನಮಸ್ಕಾರಗಳು .. :):)
ಕನ್ನಡ  ಚಿತ್ರಗಳು   ಇಷ್ಟೇನೆ , ಹೀಗೇನೆ  ಅನ್ನೋರಿಗೆ , ಇದು  ಒಂದು  ಒಳ್ಳೆಯ  ಚಿತ್ರ ..

A hatke review

Three movies , which to choose among them .. Don't worry ! here goes a code to help you decide which movie to watch !!

if (man)
{
if (20 <= age <= 30)
watch('pyaar ka punchnama');
elsif (31<=age <=40)
watch('dil toh bachcha hai ji');
else
watch('X-Men'); //doesn't matter what ur age is
endif;
}
endif;

Harry Potter and the Deathly Hallows

And here comes to an end.. the epic journey.. most probably it all began 10 years ago.. amazing finish to the character harry potter.. 3D made it more magical and enchanting.. not a great fan or follower, but having watched from the start, it was worth ...

Wednesday, 2 April 2014

Paramathma

Hmm.. ಪಂಚಾಮೃತ  ದಲ್ಲಿ  ಎಲ್ಲ  ಇದ್ದು ಹಾಲು  ಇಲ್ದೆ  ಇರೋ  ಒಂದು  ಸನ್ನಿವೇಶ  ಇವತ್ತು .. ಪುನೀತ್ , ಅನಂತ್  ನಾಗ್ , ದತ್ತಾತ್ರೇಯ , ರಂಗಾಯಣ  ರಘು .. ಹೆವಿ  ಲೋಕಲ್  ಕನ್ನಡ , ತುಳು  ಮಿಕ್ಸ್  ಆಗಿರೋ  ಭಾಷೆ .. ಎಲ್ಲ  ಇದ್ದು , ಈ  ಚಿತ್ರದಲ್ಲಿ  ಎರಡು  ಮಿಸ್ಸಿಂಗ್  ಇತ್ತು .. ಹೇಳ್ಬೇಕು  ಅಂದ್ರೆ , ತುಂಬಾನೇ  ಮಿಸ್ಸಿಂಗ್  ಇತ್ತು .. ಆದ್ರೆ  ಮುಖ್ಯವಾಗಿ  ಎರಡು .. ಕಥೆ , ಹಾಡುಗಳ  ತೋರಿಸೋ  ವಿಧಾನ .. ಕಥೆ  ಬಗ್ಗೆ  ಮಾತಾಡದೆ  ಇದ್ದರೆ  ಒಳ್ಳೇದು  ಅಂತ  ಹೇಳೋಣ  ಅನ್ಕೊಂಡೆ .. ಆದ್ರೆ  ಅದು  ಹೇಳೋದಿಕ್ಕು  ಕಥೆಂತ  ಏನಾದ್ರು  ಇರಬೇಕಿತ್ತು .. ಇದು  ಎರಡರಲ್ಲಿ  ಒಂದು  ರೀತಿಯಾದ ಕಥೆ .. 'ahead of times' ಅಥವಾ  'old bottle old wine'.. YB ಅವರ  ಚಿತ್ತ್ರದಲ್ಲಿ  ಏನ್  ಇಲ್ದೆ  ಇದ್ದರು  ಹಾಡುಗಳಿಗೆ  ಸೂಪರ್  locations ತೋರಿಸಿ , ಜನ  ಹೋಗದೆ  ಇರೋ  ಜಾಗನ   ತೋರ್ಸ್ಕೊಂಡು  ಓಡಾಡ್ತಾ  ಇದ್ದರು .. ಎಲ್ಲದಿಕ್ಕು   ಬೊಟ್ಟು  ಇಟ್ಬಿಟ್ರು  ಅನ್ಸ್ತಿದೆ .. ಚಿತ್ರ  ಬಿಡುಗಡೆ  ಮುಂಚೆ  ಒಂದು  ಸರ್ತಿ  ಆದರು  ನೋಡಿದ್ರೆ  ಚೆನ್ನಗಿರ್ತಿತ್ತೇನೋ .. ಯಾವನಿಗೆ  ಗೊತ್ತು .. ಚಿತ್ರದಲ್ಲಿ  ಬಾರೋ  ಎಷ್ಟೊಂದು  ಡೈಲಾಗ್  ಗಳು  ನಿಮ್  ಚಿತ್ರದ  ಬಗ್ಗೆ  ನೆ  ತೊರ್ಸ್ಕೊಡತ್ತೆ . Ex: 1.ಜೀವನದಲ್ಲಿ  ತಪ್ಪು  ಮಾಡ್ಬೇಕು .. ಅಲ್ವ ? ರಂಗ  SSLC, ಪರಮಾತ್ಮ .. 2.ನಮಗೆ  ನೇಣು  ಹಾಕಿ , ಆದ್ರೆ  ಈ  ರೀತಿ  ಕನ್ನಡ  ಚಿತ್ರ  ತೋರ್ಸ್ಬೇಡಿ .. ಏನೋಪ , ಕೆಟ್ಟ  ಕನಸು  ಅಂತ  ಹೇಳಿ  ಮಲ್ಗೊದೆ  ವಾಸಿ .. 16 ಹೆಜ್ಜೆ  ಮುಂದೆ  ಇಟ್ಕೊಂಡು  ಹೋಗ್ತಾ  ಇದ್ದರಿ , ಈಗ  ಸಡನ್  ಆಗಿ  8 ಹೆಜ್ಜೆ  ಹಿಂದೆ  ಬಂದಂಗಿದೆ  ಕಥೆ  ಯಲ್ಲಿ ..

Lifeu Ishtene

ಗುರುಗಳು  , ಪಂಚರಂಗಿ  ಅನ್ನೋ  ಹೆಸರಲ್ಲಿ , lifeu ishtene ಅಂತ  ತೋರ್ಸಿದ್ರು .. ಈಗ  ಶಿಷ್ಯ  lifeu istene ಅಂತ  ಹೇಳಿ , ಜೀವನ ದಲ್ಲಿ  ಹೀಗೂ  ಆಗತ್ತೆ  ಅಂತ  ಹೇಳ್ತಿದಾರೆ .. ನಿರ್ದೇಶನಕ್ಕೆ  ಮೊದಲ  ಬಾರಿ  ಕಾಲು  ಇಟ್ಟವರು   ಜಯಸೋದು  ಬಹಳ ನೆ  ಕಮ್ಮಿ .. ಪವನ್  ಈಸಿದಾರೆ , ಜಯಸಿದಾರೆ    .. ಫಿಲಂ  workout ಆಗತ್ತೆ .. ಎಷ್ಟು  ಜನ  ಫಿಲಂ  ನೋಡಿದ  ರಾತ್ರಿ  ಹೋಗಿ , ಮನಸಿನ  dvd ಪ್ಲೇಯರ್  ನಲ್ಲಿ  ಯಾವ  dvd ಹಾಕೊಂತರೋ  ಗೊತ್ತಿಲ್ಲ .. ಪರ  ಪರ  ಅಂತ  ಕೆರ್ಕೊಳ್ಳೋದನ್ನೆ  ಹೊಸ  ರೀತಿ  ತೋರ್ಸಿದರೆ .. Btw, ಇನ್ನು  ಹಳೆ  ಹುಡುಗಿ  ನೆನಪಲ್ಲಿ  ಇರೋವರಿಗೆ , move on suckers..