Thursday, 10 April 2014

ಬೇಡುವೆನು ವರವನ್ನು , ಒಳ್ಳೆ ಫಿಲಂ ತೆಗಿಯೆಂದು .. ಕಡೆ ತನಕ ಮರಿಯಲ್ಲ ಪ್ರೇಕ್ಷಕ ..

ಎದ್ದೇಳು  ಮಂಜುನಾಥ  ಫಿಲಂ ನಲ್ಲಿ  ತಬಲ  ನಾಣಿ ದು  ಒಂದು  ಡೈಲಾಗ್  ಇತ್ತು .. "ಉಪೇಂದ್ರ  ಅವರಿಗೆ  ಕೆಪ್ಯಾಸಿಟಿ  ಇತ್ತು .. ಎರಡು  ಮಾಡ್ಕೊಂಡ್ರು .. ಜೈಸಿಕೊಂಡ್ರು  .. ಹಾಗಂತ  ಎಲ್ಲಾರು  ಮಾಡೋದಿಕ್ಕೆ  ಆಗತ್ತಾ .. ನಮ್ಮ  ಹುಡುಗ  ನೋಡಿ .. ಎರಡು  ಮಾಡ್ತೀನಿ  ಅಂತ  ಹೋಗಿ  ಸಿಕ್ಕಿಹಾಕಿಕೊಂಡು  ಎರಡು  ವರುಷ  ಆಯಿತು  ಆಚೆ  ಬರೋದಿಕ್ಕೆ ... ರಿಲೀಸ್  ಆದ್ಮೇಲೆ ಏನಾಯ್ತು   ಅಂತ  ನಿಮಗೆ  ಗೊತ್ತಲ್ವ "
 
ಜೋಗಯ್ಯ  ಮತ್ತೆ  ಸೂಪರ್  ನಡುವೆ  ಇರುವ  ಒಂದೇ  ಒಂದು  ವ್ಯತ್ಯಾಸ  ಅಂದ್ರೆ  ಉಪೇಂದ್ರ ನೇ ... ಜೋಗಿ  ಎಲ್ಲಿ  ಮುಗಿತು  ಅಲ್ಲಿಂದ  ಶುರು  ಮಾಡ್ಕೊಂಡು   ಸೂಪರ್  ಆಗಿ  ತೆಗಿತೀನಿ  ಅಂತ  ಹೋದರು .. ಮಟಾಶ್  ಅಷ್ಟೇ .. ಇನ್ನ  ಜೋಗಯ್ಯ  ಸೀಕ್ವೆಲ್  ಬರಬೇಕು  ಅಂದ್ರೆ  ಬೇರೆ  ಡೈರೆಕ್ಟರ್  ದಾರಿ  ತೋರಿಸಬೇಕು  ಪ್ರೇಂ ಗೆ .. ಶಿವಣ್ಣ  ಆಕ್ಟಿಂಗ್  ಸೂಪರ್ .. ತಗ್ಲಾಕ್ಕೊಂಡೆ,  ಕುರಿ  ಕುಯ್ಯೊಂಗಿಲ್ಲ  ಬೆಸ್ಟ್  ಸಾಂಗ್ಸ್ .. ಸಿಲ್ಲಿ  ಲಲ್ಲಿ  ಗ್ಯಾಂಗ್  ಅವರನ್ನೇ  ಇಲ್ಲಿ  ಬೇರೆ  ಬೇರೆ  ಪಾತ್ರ ಗಳಲ್ಲಿ  ಉಪಯೋಗಿಸಿಕೊಂಡಿದ್ದು  ಉತ್ತಮ .. heroine ಗೆ  ಕನ್ನಡ ನೇ   ಬರಲ್ಲ , ಅದರಲ್ಲಿ  ಉತ್ತರ  ಕರ್ನಾಟಕದವಳು ಅಂತ  ಬೇರೆ ತೋರಿಸಿಬಿಟ್ಟಿದಾರೆ ... ಅವರು ಮಾತಾಡಿದಾಗೆಲ್ಲ  ಧಾರವಾಡ್  ಕಡೆಯವರು  ಪರ  ಪರ  ಪರ  ಅಂತ  ಕೆರ್ಕೊಂಡು  ಬಿಡ್ತಾರೆ ..
 
ಪ್ರೇಂ ಗೆ  ಈ  ಮಾತು  "ನಿಮವ್ವ  ಹೇಳವರೆ , ಒಳ್ಳೆ  ಫಿಲಂ  ತೆಗೆದು  ದುಡಿ , ಈ  ಕಿತ್ತೋಗಿರೋ  ಫಿಲಂ ಗಳು  ಬೇಡ  ಅಂತ ".. ಇರೋ  ಬರೋ ಸೈಡ್  ಆಕ್ಟರ್ಸ್ ಗೆಲ್ಲ  ಒಳ್ಳೆ  ಬಟ್ಟೆ  ಉಡ್ಸಿದರೆ  ಹೀರೋ  ಮಾತ್ರ  ಕಿತ್ತೋಗಿರೋ  ಬಟ್ಟೆ  ಹಾಕೊಂಡೆ  ಮೆರಿಯೋ  ಪ್ರಸಂಗ  ಏನು  ಅಂತ  ನಾ  ಕಾಣೆ !! ಎಲ್ಲದಕ್ಕಿಂತ  ಮೇಲಾಗಿ , ಫಿಲಂ  ರಿಲೀಸ್  ಆಗೋದಿಕ್ಕೆ  ಎರಡು  ದಿನ  ಮುಂಚೆ  ಪ್ರೆಸ್  ರಿಲೀಸ್ ನಲ್ಲಿ  ಇದು  ರೌಡಿಸಂ  ಫಿಲಂ  ಅಲ್ಲ  ಅಂತ  ಬೇರೆ ಹೇಳಿದಾರೆ .. ಕನ್ನಡ   ಫಿಲಂ  ನೋಡಿ  ಬೈದಿದಿನಿ .. ಯಾರಾದ್ರೂ  ಮತ್ತೆ  ಲೈಫು ಇಷ್ಟೇನೆ  ಹಾಡಿನ  ಸಾಲುಗಳು  ಹೇಳಿದ್ರಿ  ಅಂದ್ರೆ , ಜೋಗಯ್ಯ  ನ  ಬ್ಯಾಕ್  ಟು  ಬ್ಯಾಕ್  ತೋರಿಸಿಬಿಡ್ತೀನಿ .. ಶಿವಣ್ಣ ಗೋಸ್ಕರ ನೋಡ್ಬೇಕು .. ಬೇರೆ  ಏನು  ಹೇಳ್ಕೊಳೋ  ತರಹ  ಇಲ್ಲ ..  2D ನಲ್ಲಿ  ನೋಡಿದ  ನಾನೇ  ಇಷ್ಟೆಲ್ಲಾ  ಬರೆದಿರಬೇಕಾದ್ರೆ , 3D ನಲ್ಲಿ  ನೋಡಿದವರು  ಸಂತೋಷ್  ಹೆಗ್ಡೆ  ಹತ್ತಿರ  ಪೇಪರ್  ಇಸ್ಕೊಂಡು  ಬಂದು  ಬರೀಬೇಕು  ಅಷ್ಟೇ .. 1000 ಪೇಜ್  ಕೂಡ  ಕಮ್ಮಿ  ಆಗಬಹುದು .. 
 
ಪ್ರೇಂ  ವರ್ಷನ್  ಇನ್  ಮೂವಿ : ಹುಟ್ಟು  ಭಿಕ್ಷೆ  ಕಣೋ , ಬದುಕು  ಶಿಕ್ಷೆ  ಕಣೋ .. ಬ್ರಹ್ಮ  ಬರೆದಿದ್ದು  ಇಷ್ಟೇ  ಕಣೋ ..
ನನ್  ವರ್ಷನ್  after the movie: ಪ್ರೇಂ  ಸಾಕು  ಕಣೋ , ಜೋಗಯ್ಯ  ಒಂಥರಾ ಶಿಕ್ಷೆ  ಕಣೋ .. ನೀನು  ಇನ್ಮೇಲೆ  ಸೀಕ್ವೆಲ್  ತಗೆದರೆ  ಅಷ್ಟೇ  ಕಣೋ ..!!!

No comments:

Post a Comment