Hmm.. ಪಂಚಾಮೃತ ದಲ್ಲಿ ಎಲ್ಲ ಇದ್ದು ಹಾಲು ಇಲ್ದೆ ಇರೋ ಒಂದು ಸನ್ನಿವೇಶ ಇವತ್ತು .. ಪುನೀತ್ , ಅನಂತ್ ನಾಗ್ , ದತ್ತಾತ್ರೇಯ , ರಂಗಾಯಣ ರಘು .. ಹೆವಿ ಲೋಕಲ್ ಕನ್ನಡ , ತುಳು ಮಿಕ್ಸ್ ಆಗಿರೋ ಭಾಷೆ .. ಎಲ್ಲ ಇದ್ದು , ಈ ಚಿತ್ರದಲ್ಲಿ ಎರಡು ಮಿಸ್ಸಿಂಗ್ ಇತ್ತು .. ಹೇಳ್ಬೇಕು ಅಂದ್ರೆ , ತುಂಬಾನೇ ಮಿಸ್ಸಿಂಗ್ ಇತ್ತು .. ಆದ್ರೆ ಮುಖ್ಯವಾಗಿ ಎರಡು .. ಕಥೆ , ಹಾಡುಗಳ ತೋರಿಸೋ ವಿಧಾನ .. ಕಥೆ ಬಗ್ಗೆ ಮಾತಾಡದೆ ಇದ್ದರೆ ಒಳ್ಳೇದು ಅಂತ ಹೇಳೋಣ ಅನ್ಕೊಂಡೆ .. ಆದ್ರೆ ಅದು ಹೇಳೋದಿಕ್ಕು ಕಥೆಂತ ಏನಾದ್ರು ಇರಬೇಕಿತ್ತು .. ಇದು ಎರಡರಲ್ಲಿ ಒಂದು ರೀತಿಯಾದ ಕಥೆ .. 'ahead of times' ಅಥವಾ 'old bottle old wine'.. YB ಅವರ ಚಿತ್ತ್ರದಲ್ಲಿ ಏನ್ ಇಲ್ದೆ ಇದ್ದರು ಹಾಡುಗಳಿಗೆ ಸೂಪರ್ locations ತೋರಿಸಿ , ಜನ ಹೋಗದೆ ಇರೋ ಜಾಗನ ತೋರ್ಸ್ಕೊಂಡು ಓಡಾಡ್ತಾ ಇದ್ದರು .. ಎಲ್ಲದಿಕ್ಕು ಬೊಟ್ಟು ಇಟ್ಬಿಟ್ರು ಅನ್ಸ್ತಿದೆ .. ಚಿತ್ರ ಬಿಡುಗಡೆ ಮುಂಚೆ ಒಂದು ಸರ್ತಿ ಆದರು ನೋಡಿದ್ರೆ ಚೆನ್ನಗಿರ್ತಿತ್ತೇನೋ .. ಯಾವನಿಗೆ ಗೊತ್ತು .. ಚಿತ್ರದಲ್ಲಿ ಬಾರೋ ಎಷ್ಟೊಂದು ಡೈಲಾಗ್ ಗಳು ನಿಮ್ ಚಿತ್ರದ ಬಗ್ಗೆ ನೆ ತೊರ್ಸ್ಕೊಡತ್ತೆ . Ex: 1.ಜೀವನದಲ್ಲಿ ತಪ್ಪು ಮಾಡ್ಬೇಕು .. ಅಲ್ವ ? ರಂಗ SSLC, ಪರಮಾತ್ಮ .. 2.ನಮಗೆ ನೇಣು ಹಾಕಿ , ಆದ್ರೆ ಈ ರೀತಿ ಕನ್ನಡ ಚಿತ್ರ ತೋರ್ಸ್ಬೇಡಿ .. ಏನೋಪ , ಕೆಟ್ಟ ಕನಸು ಅಂತ ಹೇಳಿ ಮಲ್ಗೊದೆ ವಾಸಿ .. 16 ಹೆಜ್ಜೆ ಮುಂದೆ ಇಟ್ಕೊಂಡು ಹೋಗ್ತಾ ಇದ್ದರಿ , ಈಗ ಸಡನ್ ಆಗಿ 8 ಹೆಜ್ಜೆ ಹಿಂದೆ ಬಂದಂಗಿದೆ ಕಥೆ ಯಲ್ಲಿ ..
No comments:
Post a Comment